Thursday, March 19, 2009

ಕಪ್ಪು ಚುಕ್ಕೆ



ನನ್ನ ಮೊಗದಲ್ಲಿ ನಗುವಿಲ್ಲ, ಕಣ್ಣಿಗೆ ನಿದ್ದೆಯಿಲ್ಲ,
ಒಂಟಿತನ ನನ್ನನ್ನು ಒಳಗೊಳಗೆ ತಿನ್ನುತ್ತಿದೆ
ಗೆಳತಿ ನಿನಗಾಗಿಯೇ ಸಿಂಗರಿಸಿಕೊಂಡಿದ್ದು
ವ್ಯರ್ಥವಾಯಿತೇ ? ಅರ್ಥವಿಲ್ಲದೇ ಹೋಯಿತೇ ?

ನನ್ನ ಸ್ವಾರ್ಥದ ಕಹಿನೆರಳಲ್ಲಿ, ನಿನ್ನ ಕೄತಕ
ಭಾಂದವ್ಯದ ಬಂಧನದಲ್ಲಿ ಹೇಗೆ
ಅರಳುವುದೋ ನಮ್ಮ ಪ್ರೇಮಬಳ್ಳಿ ?

ನಿನ್ನೊಳಗೆ ಅನೇಕ ಚಿತ್ತಾರಗಳಿದ್ದರೂ
ನನ್ನ ಚಿತ್ರವೇಕಿಲ್ಲ ?
ನಿನ್ನ ಸ್ಥಿತಿ ಪ್ರಜ್ಞೆ - ಮೌನಕ್ಕೆ
ನೆಲೆಯಿಲ್ಲ - ಬೆಲೆಯಿಲ್ಲ !

ನನ್ನೀ ಬರಡು ಬದುಕಿನ ಮೊದಲ ಗೆಳತಿ ನೀ
ಬತ್ತಿಹೋದ ನೆನಪುಗಳು ಚಿಗುರೊಡೆಯ ಬೇಕು
ನೀ ನನ್ನ ಬಿಟ್ಟರು ನಾ ನಿನ್ನ ಬಿಡಲೊಲ್ಲದು
ತೊರೆಯದಿರು ಪ್ರೀತಿಯ ಮರೆಯದಿರು,

8 comments:

  1. ನನ್ನ ಮಾತಿಗೆ ಅಂತು ಬೆಲೆ ಇದೆ ಅಂತಾಯ್ತು :) "ನಿನ್ನೊಳಗೆ ಅನೇಕ ಚಿತ್ತಾರಗಳಿದ್ದರೂ ನನ್ನ ಚಿತ್ರವೇಕಿಲ್ಲ ?" ಈ ಸಾಲು ಇಷ್ಟವಾಯಿತು... ಬ್ಲಾಗ್ ಲೋಕಕ್ಕೆ ಸ್ವಾಗತ, ಹೀಗೆ ಬರೆಯುತ್ತಾ ಇರಿ :)

    ReplyDelete
  2. ನಂದನ್,
    ಬ್ಲಾಗ್ ತೆರೆದು ಒಂದು ಮಾತನ್ನು ಹೇಳದೆ ಇದ್ದಿದ್ದು ಎಷ್ಟರ ಮಟ್ಟಿನ ನ್ಯಾಯ?
    "ನನ್ನ ಸ್ವಾರ್ಥದ ಕಹಿನೆರಳಲ್ಲಿ, ನಿನ್ನ ಕೄತಕ
    ಭಾಂದವ್ಯದ ಬಂಧನದಲ್ಲಿ ಹೇಗೆ
    ಅರಳುವುದೋ ನಮ್ಮ ಪ್ರೇಮಬಳ್ಳಿ ?"
    ಈ ಸಾಲುಗಳು ತುಂಬಾ ಇಷ್ಟವಾಯಿತು...

    ReplyDelete
  3. ಬ್ಲಾಗುಲೋಕಕ್ಕೆ ವೆಲ್ಕಮ್ಮು..

    ಬರೆಯುತ್ತಿರಿ..

    ಬೆಳೆಯುತ್ತಿರಿ..:)

    ReplyDelete
  4. ಶ್ರೀ ಅವರೇ,
    ತುಂಬಾ ದನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ...

    ReplyDelete
  5. ಕಂಡಿತಾ ಕಲ್ಮನೆ ಅಣ್ಣ :) ನಿಮ್ಮ ಸಲಹೆ ಅಗತ್ಯ :)..

    ReplyDelete
  6. ಕ್ಷಮಿಸಿ ಮಂಜು ಅಣ್ಣ, ಕೆಲಸದ ಒತ್ತಡ ಮದ್ಯ ಆಗಿಲ್ಲ ನಿಮ್ಮ ಪ್ರೋತ್ಸಾಹ ಅಗತ್ಯ, ಸಂತೋಷ ನಿಮ್ಮ ಕಾಮೆಂಟ್ಸ್ ಗೆ..ಕುಶಿ ಆಯ್ತು ನಿಮ್ಮ ಕಾಮೆಂಟ್ಸ್ ನೋಡಿ ..

    ReplyDelete
  7. ನೀಲಿ ಹೂವಿನ ಅಣ್ಣ ನಮಸ್ತೆ, ನಿಮ್ಮ ಆಶೀರ್ವಾದ ಅಣ್ಣ, ಥ್ಯಾಂಕ್ಸ್ ...

    ReplyDelete